ಸ್ನೇಹ ಸಿಂಚನ
ಸಂತಸದ ಸಿಂಚನವನೂ
ಕಾಣದ ಮನಸ್ಸು
ಕಾತುರದಿ ಕಾಯುವುದು
ಸ್ನೇಹದ ಸ್ಪಂದನಕ್ಕಾಗಿ
ದುಃಖದ ಬಂಧನದಿಂದ
ಹೊರಬಂದ ಮನಸ್ಸು
ಕಾಯುವುದು,
ಪ್ರೀತಿಯ ಸಿಂಚನಕ್ಕಾಗಿ
- ಬ ಸ ವ ರಾ ಜ ಹ ರ ಸೂ ರ
ಕಲ್ಲು ಮನಸ್ಸೆ
ಕಲ್ಲಾಗಿಹೆಯೇಕೆ ನೀ ಮನಸ್ಸೆ
ಸ್ಪಂದಿಸು ನಿನ್ನೊಳಗಿನ ಭಾವನೆಗಳಿಗೆ
ಮಂಜಿನಂತೆ ಕರಗುವೆ ಒಮ್ಮೊಮ್ಮೆ
ಇಂದೇಕೆ ಹೀಗಿರುವೆ ಓ ಮನಸ್ಸೆ
ಮೂಕ ಮನಸೆ
ಮಾತಾದು ನೀ ಮನಸ್ಸು ಬಿಚ್ಚಿ
ಹೆಪ್ಪುಗಟ್ಟಿರುವ ಭಾವನೆಗಳ
ಬಡಿದೆಬ್ಬಿಸು ನೀ ಓ ಮನಸ್ಸೆ
ಮಾತು ಮೂಕವಾದರೆ
ಮನಸು ಮಾತನಾಡದೆ
ಬಚ್ಚಿಡದಿರು ಭಾವನೆಗಳ,
ಮೂಕ ಮನಸ್ಸೆ
ಕಣ್ಣೀರಿನ ಒಂದು ಹನಿ
ಮನಸ್ಸ ಹಗುರಗೊಳಿಸಿದರೆ
ಅತ್ತು ಮನವ ತೃಪ್ತಿಗೊಳಿಸೆ
ಮುಗ್ಧ ಮನಸ್ಸೆ
ದುಃಖ ಮನದಲ್ಲಿದ್ದರು
ಮಗುಳ್ನಗೆ ಬೀರುವ ಮುಖಗಳು
ಈ ನಾಟಕಕ್ಕೆಂದು ಕೊನೆಯೋ
ಹುಚ್ಚು ಮನಸ್ಸೆ
ಎದೆಗುಂದದಿರು ನೀನು
ಕಲ್ಲಾಗಿಹೆ ಇರು ನೀನು
ಬದಲಾಗುವ ಪ್ರೀತಿಗೆ
ಮನಸೋಲದೆ ಇರು ನೀನು
ಕಲ್ಲು ಮನಸ್ಸೆ++
- ಬ ಸ ವ ರಾ ಜ ಹ ರ ಸೂ ರ
ಬದುಕು
ಸ್ನೇಹದ ಆಸರೆಯಿಂದ
ದೂರಾಗಲು ಬಯಸುವೆ ಏಕೆ?
ವಾತ್ಸಲ್ಯದ ಸೂರಡಿ
ಕೊರಗಲು ಕಾತುರವೇಕೆ?
ದೊರಕದು ಬಯಸುವುದು
ನಮಗದು ಬೇಕೆಂದಾಗ
ಬಯಸಿದದು ನಮ್ಮದಾದಾಗ
ನಿರ್ಲಕ್ಷವದು ನಮಗಾಗ
ಬಯಸ್ಸಿದ್ದು ದೊರಕದು
ದೊರಕಿದ್ದು ದಕ್ಕದು
ಬದುಕು ನಮ್ಮ ಇಚ್ಚೆಯಂತೆ
ಎಂದೂ ನಡೆಯದು
- ಬ ಸ ವ ರಾ ಜ ಹ ರ ಸೂ ರ