Friday, 8 June 2012


ಸ್ನೇಹ ಸಿಂಚನ

ಸಂತಸದ ಸಿಂಚನವನೂ
ಕಾಣದ ಮನಸ್ಸು
ಕಾತುರದಿ ಕಾಯುವುದು
ಸ್ನೇಹದ ಸ್ಪಂದನಕ್ಕಾಗಿ

ದುಃಖದ ಬಂಧನದಿಂದ 
ಹೊರಬಂದ ಮನಸ್ಸು
ಕಾಯುವುದು,
ಪ್ರೀತಿಯ ಸಿಂಚನಕ್ಕಾಗಿ 



                                                      - ಬ ಸ ವ ರಾ ಜ  ಹ ರ ಸೂ ರ 









ಕಲ್ಲು ಮನಸ್ಸೆ

ಕಲ್ಲಾಗಿಹೆಯೇಕೆ ನೀ ಮನಸ್ಸೆ 
ಸ್ಪಂದಿಸು ನಿನ್ನೊಳಗಿನ ಭಾವನೆಗಳಿಗೆ 
ಮಂಜಿನಂತೆ ಕರಗುವೆ ಒಮ್ಮೊಮ್ಮೆ 
ಇಂದೇಕೆ ಹೀಗಿರುವೆ ಓ ಮನಸ್ಸೆ 

ಮೂಕ ಮನಸೆ 
ಮಾತಾದು ನೀ ಮನಸ್ಸು ಬಿಚ್ಚಿ 
ಹೆಪ್ಪುಗಟ್ಟಿರುವ ಭಾವನೆಗಳ 
ಬಡಿದೆಬ್ಬಿಸು ನೀ ಓ ಮನಸ್ಸೆ 

ಮಾತು ಮೂಕವಾದರೆ 
ಮನಸು ಮಾತನಾಡದೆ 
ಬಚ್ಚಿಡದಿರು ಭಾವನೆಗಳ, 
ಮೂಕ ಮನಸ್ಸೆ 

ಕಣ್ಣೀರಿನ ಒಂದು ಹನಿ 
ಮನಸ್ಸ ಹಗುರಗೊಳಿಸಿದರೆ 
ಅತ್ತು ಮನವ ತೃಪ್ತಿಗೊಳಿಸೆ 
ಮುಗ್ಧ ಮನಸ್ಸೆ 

ದುಃಖ ಮನದಲ್ಲಿದ್ದರು 
ಮಗುಳ್ನಗೆ ಬೀರುವ ಮುಖಗಳು 
ಈ ನಾಟಕಕ್ಕೆಂದು ಕೊನೆಯೋ 
ಹುಚ್ಚು ಮನಸ್ಸೆ 

ಎದೆಗುಂದದಿರು ನೀನು 
ಕಲ್ಲಾಗಿಹೆ ಇರು ನೀನು 
ಬದಲಾಗುವ ಪ್ರೀತಿಗೆ 
ಮನಸೋಲದೆ ಇರು ನೀನು 
ಕಲ್ಲು ಮನಸ್ಸೆ++


                                                             - ಬ ಸ ವ ರಾ ಜ  ಹ ರ ಸೂ ರ 











ಬದುಕು


ಬದುಕು

ಸ್ನೇಹದ ಆಸರೆಯಿಂದ 
ದೂರಾಗಲು ಬಯಸುವೆ ಏಕೆ? 
ವಾತ್ಸಲ್ಯದ ಸೂರಡಿ 
ಕೊರಗಲು ಕಾತುರವೇಕೆ? 

ದೊರಕದು ಬಯಸುವುದು 
ನಮಗದು ಬೇಕೆಂದಾಗ 
ಬಯಸಿದದು ನಮ್ಮದಾದಾಗ 
ನಿರ್ಲಕ್ಷವದು ನಮಗಾಗ 

ಬಯಸ್ಸಿದ್ದು ದೊರಕದು 
ದೊರಕಿದ್ದು ದಕ್ಕದು 
ಬದುಕು ನಮ್ಮ ಇಚ್ಚೆಯಂತೆ 
ಎಂದೂ ನಡೆಯದು


                                                                       - ಬ ಸ ವ ರಾ ಜ  ಹ ರ ಸೂ ರ 









ಕಲ್ಪನೆ


ಕಲ್ಪನೆ

ನಾಳೆಯ ನಿರೀಕ್ಷೆ ಇಲ್ಲದೆ 
ನೆನ್ನೆಯ ನೆನಪಿಲ್ಲದೆ 
ಬದುಕು ಸಾಧ್ಯವೆ? 
ನಾಳೆಯ ಕನಸು 
ನೆನ್ನೆಯ ನೆನಪು 
ಇಂದಿನ ಬದುಕು 
ಎಲ್ಲವು ಬೇಕು ಈ ಜೀವಕೆ 
ನೆನಪಿನ ಸೂರಡಿ 
ಕನಸಿನ ಮನೆ ಮಾಡಿ 
ನಿರೀಕ್ಷಿಸಿದ ನಾಳೆಯ ಬಗ್ಗೆ 
ಯೋಚಿಸುವುದೇ ಜೀವನ 

ನೆನಪು ಕನಸುಗಳೇನೇ ಇದ್ದರು 
ವಾಸ್ತವವದೇ ಸತ್ಯ 
ಇದನರಿಯದೆ ಭ್ರಮೆಯಲ್ಲಿದ್ದೆ 
ಇಷ್ಟು ದಿನದ ಜೀವನವದೆಲ್ಲ ಮಿಥ್ಯ 

ಕಲ್ಪನೆ ಅದು ಜೀವನಕ್ಕಲ್ಲ 
ಕವನಕೆ ಮಾತ್ರ 
ಕನಸ್ಸಿದು ಬದುಕಿಗಲ್ಲ 
ಮನಸ್ಸಿಗೆ ಮಾತ್ರ


                                                    - ಬ ಸ ವ ರಾ ಜ  ಹ ರ ಸೂ ರ 











ಬಾಳ ಪಯಣ


ಬಾಳ ಪಯಣ

ಮುಂದೇನೆಂದು ಅರಿಯದೆ 
ಕಾಣದ ದಾರಿಯಲ್ಲಿ ಹೊರಟಿರುವೆ 
ಎಲ್ಲಿ ಹೋಗುವುದೋ ಆ ದಾರಿ 
ಮುಗಿಯುವುದೆಂದೋ ಈ ಪಯಣ 

ಬಾಳ ಪಯಣದಲಿ 
ದಣಿದಿರುವ ದೇಹಕ್ಕೆ 
ಪ್ರೀತಿಯ ಆರೈಕೆ ಬೇಕು 
ಸ್ನೇಹದ ಸಾಮಿಪ್ಯ ಬೇಕು 

ದಣಿವಾರದ ಜೀವಕ್ಕೆ 
ಪಯಣವದು ವ್ಯರ್ಥವೆನಿಸುವುದು 
ಪ್ರೀತಿಕಾಣದ ಮನಸ್ಸಿಗೆ 
ಬದುಕಿದು ಸಾಕೆನಿಸುವುದು

                                       - ಬ ಸ ವ ರಾ ಜ  ಹ ರ ಸೂ ರ 

ಭಾವಾಂತರಂಗ


ಭಾವಾಂತರಂಗ

ನೊಂದಿದೆ ಏಕೋ ಈ ಮನಸ್ಸು 
ಅರಿಯಲಾಗದ ದ್ವಂದ್ವ 
ತನ್ನೊಳಗೆ ಏನಾಗುತಿದೆ ಎಂದು 
ಅರಿಯದಂತಾಗಿದೆ ಈ ಮನಸ್ಸಿಗೆ 

ಕನಸುಗಳ ಭಂಡಾರದಲಿ 
ತೇಲುತ್ತಿದ್ದ ಮನಸ್ಸಿಗೆ 
ವಾಸ್ತವವಿದು ಅನುಭವಿಸಲಾಗದ ಸುಖದಂತಾಗಿದೆ 

ಮಾತಿನಲ್ಲಿರುವ ಮರ್ಮ 
ಮೌನದೊಳಗಿನ ಮಾತು 
ಮನಸ್ಸಿನೊಳಗಿನ ಭಾವನೆ 
ಯರೂ ಅರಿಯದಂತಹ 
ಸುಂದರ ಭಾವ 

ಮಾತು ಮನಸ್ಸಲಿದ್ದರೆ 
ಮನಸ್ಸಿಗೆ ಬೇಸರ 
ಮಾತನ್ನ ಎದುರಿಗಾಡಿದರೆ 
ಕೇಳುವವರಿಗೆ ಬೇಸರ 

ಮಾತು ಮಾಯೆಯೋ? 
ಮೌನ ಮಾಯೆಯೋ?? 
ಮಾತು ಮೌನಗಳೊಳಗಿನ 
ಮರ್ಮ ಮಾಯೆಯೋ???

                                           - ಬ ಸ ವ ರಾ ಜ  ಹ ರ ಸೂ ರ 















ನೋವು


ನೋವು

ನೊವೆಂದರೆ ಬೇರೆ ಬೇನೆಯಲ್ಲ 
ಅದು ಪ್ರೀತಿಯ ಕೊರತೆಯು 
ಪ್ರೀತಿ ಕಾಣದ ಮನಸ್ಸು 
ಅನುಭವಿಸುವ ನರಕವೇ ನೊವು 

ಪ್ರೀತಿ ತುಂಬಿದ ಮನಸುಗಳಿಗೆ 
ಅರಿವಾಗದು ನೋವಿನ ಭಾವವು 
ಪ್ರೀತಿಯ ಕೊರತೆಯೇ ಮನುಜನ 
ಪ್ರತಿ ನೋವಿನ ಕಾರಣವು 

ಸಿರಿವಂತಿಕೆಯ ಯಾವ ವ್ಯವಸ್ಥೆಯೂ 
ನೀಡಲಾಗದು ಪ್ರೀತಿಯ ಎಳೆಯನು 
ಆದರೆ, 
ಬಡತನದ ಬೇಗೆಯನು 
ತಂಪುಗೊಳಿಸುವುದು ಪ್ರೀತಿಯ 
ಎರಡು ನುಡಿಯು 

ಸಂತೋಷ ದುಃಖಗಳಿಗೆ ಅಸ್ತಿತ್ವವಿಲ್ಲ 
ಪ್ರೀತಿಯ ನೆರಳು ಎನ್ನಬಹುದು ಇವುಗಳನು
ಪ್ರೀತಿ ಇದ್ದರೆ ಸಂತೋಷ,
ಇಲ್ಲದಿರೆ ನೋವು,
ಈ ಎರಡು ಸ್ಥಿತಿಯೇ, ಮನುಜನ ಮನಸ್ಸಿನ 
ಹಲವು ಭಾವನೆಗಳ ಮೂಲ

                                          - ಬ ಸ ವ ರಾ ಜ  ಹ ರ ಸೂ ರ 













ಮನಸು


ಮನಸು

ಮೌನದಿಂದಿರುವೆ ಏಕೆ ನೀ ಮನವೆ ? 
ಮಾತಾಡದಿದ್ದರೆ ಪ್ರೀತಿ ದೂರಾಗುವುದು,
ಮೌನವನು ಮುರಿದರೆ, ಭಯ ಆವರಿಸುವುದು
ಆತಂಕಮಯವಾದ ಬದುಕು ನರಕವಾಗಿಹುದು !!!

ಭಯದ ಕರಿನೆರಳು ತುಂಬಿರುವ ಈ ಬದುಕಿಗೆ,
ಬೆಳದಿಂಗಳು ಚೆಲ್ಲುವುದು ಎಂದೊ ??
ಒಳ್ಳೆಯ ದಿನಗಳಿಗಾಗಿ, ಇನ್ನೂ ಕಾಯುತಿಹುದು ಈ ಮನವು,
ಕಾಯುವುದೆ ಬದುಕಿಗಾಗಿ ಇಂದು.

ನಂಬಿಕೆಯೆ ಉಸಿರೆಂದು ತಿಳಿದಿರುವ ಮನಕೆ,
ಬರವಸೆಯ ಬೆಳಕನ್ನು ತೋರು ನೀನು,
ನಂಬಿಕೆಯೆ ಉಸಿರಾದರೆ, ಪ್ರೀತಿಯು,
ಜೀವ ತುಂಬುವುದು ಈ ಬದುಕಿಗೆ.
ಪ್ರೀತಿ, ನಂಬಿಕೆ, ಬರವಸೆಗಳನ್ನು ದೂರ
ಮಾಡದಿರು ನನ್ನೀ ಬದುಕಿನಿಂದ....

                                   - ಬ ಸ ವ ರಾ ಜ  ಹ ರ ಸೂ ರ 































ಹೇಳಲಾಗದ ಪ್ರೀತಿ


ಹೇಳಲಾಗದ ಪ್ರೀತಿ

ಹೇಳಲಾಗದ ಪ್ರೀತಿಯ ನೋವನ್ನು 
ಅನುಭವಿಸುವ ಮನಸ್ಸಿನ ವೇದನೆ 
ನರಕವೇ ಸರಿ, 
ಹೇಳುವ ಆತುರ, 
ಹೇಳಲೇಬೇಕಾದ ಅವಶ್ಯಕತೆ 
ಆದರೆ ಹೇಳಲಾಗದ ಅನಿವಾರ್ಯತೆ!! 

ಅವಶ್ಯವೋ ಅನಿವಾರ್ಯವೋ, 
ನೋವನ್ನು ಅನುಭವಿಸುವುದು 
ಮಾತ್ರ ಈ ಮುಗ್ದ ಮನಸ್ಸು 

ತನ್ನೊಳಗಿನ ಸತ್ಯ, ತನ್ನನ್ನೆ ಕಿತ್ತು ತಿಂದರು, 
ಮುಖದ ಮೇಲೊಂದು ಕಿರುನಗೆ ಬೀರಿ, 
ತನ್ನ ನೋವನ್ನು ಮರೆತು, ಸದಾ ನಗುವ, 
ನಿರ್ಮಲ ಮನಸ್ಸಿನ ಭಾವನೆಯನ್ನು 
ಎಂದು ಅರಿಯುವೆಯೊ ನೀ ಪ್ರಿಯತಮ??

                                                       - ಬ ಸ ವ ರಾ ಜ  ಹ ರ ಸೂ ರ 







ಪ್ರೀತಿ


ಪ್ರೀತಿ

ಮಸುಕಾಗಿದೆ ಮನಸ್ಸಿನ ಮಾತು 
ಮಂಜಿನ ಭರದಲಿ
ಪ್ರೀತಿಯ ಹೂಗಳು ಅರಳಿವೆ
ಮಂಜಿನ ಮಳೆಯಲಿ

ಸುಂದರ ಕನಸಿಗೆ, 
ನಲ್ಮೆಯ ಭಾವ ತುಂಬುವುದು 
ಪ್ರೀತಿಯ ಸಂಬಂಧ

ಭಾವನೆಗಳಿಗೆ ಜೀವ ತುಂಬುವ ಸುಮಧುರ ಅನುಭವವೆ 
ಪ್ರೀತಿಯ ಭಾವ

                                             - ಬ ಸ ವ ರಾ ಜ  ಹ ರ ಸೂ ರ 







ಪ್ರೀತಿ


ಪ್ರೀತಿ

ಸೋಲದ ಮನಸುಗಳಿಲ್ಲ 
ಈ ಪ್ರೀತಿಗೆ 
ಬೇಡವೆಂದು ದೂರವಿದ್ದರು
ತನ್ನೆಡೆಗೆ ಸೆಳೆಯುವ ಸುಮಧುರ 
ಭಾವವೇ ಈ ಪ್ರೀತಿ

ಹುಟ್ಟಿನ ಅರಿವಿಲ್ಲ 
ಸಾವದು ತನಗಿಲ್ಲ 
ಎಂದು ಮುನ್ನಡೆಯುವ 
ಪ್ರೀತಿಗೆ ಕೊನೆಯಿಲ್ಲ

ಜೀವ ಕಳೆದುಕೊಂಡಿರುವ ಭಾವನೆಗಳಿಗೆ
ಉಸಿರು ನೀಡಿ,
ಬರದಾದ ಬದುಕಿಗೆ, ಹೊಸ 
ಚೈತನ್ಯ ನೀಡಿ,
ಭಾವನಾತ್ಮಕ ಬದುಕಿಗೆ 
ಹೊಸ ಅರ್ಥ ನೀಡಿ,
ಬದುಕಿನ ಪಯಣದ ಸಾರ್ಥಕತೆಯನ್ನು
ನೀಡುವ ಒಂದು ಸುಂದರ 
ಅನುಭವವೇ ಪ್ರೀತಿ

                                                                                    - ಬ ಸ ವ ರಾ ಜ  ಹ ರ ಸೂ ರ 

ಭಾವನೆ


ಭಾವನೆ

ಆಟವಾಡದಿರು ಭಾವನೆಗಳೊಂದಿಗೆ 
ಒಮ್ಮೆ ಪ್ರೀತಿ ಹತ್ತಿರವಾಗುತಿದೆ ಎನಿಸಿದರು
ಮತ್ತೊಮ್ಮೆ ದೂರವಾಗುತಿಹುದೆಂಬ ಭಯ
ಆತಂಕದ ಛಾಯೆ ಮನದಲಿದ್ದರು
ಏನು ಹೇಳಲಾಗದ ಸಂದರ್ಭ 
ಹೇಳಲು ಆಗದ 
ಅನುಭವಿಸಲು ಆಗದ 
ಈ ಯಾತನೆ,
ಮನುಜನ ಭಾವನೆಗಳನ್ನು
ಕಣ ಕಣವಾಗಿ ಕಿತ್ತು ತಿನ್ನುವುದು

ಹತ್ತಿರವಾಗಬೇಕೆಂಬ ನೂರು ಬಯಕೆಗಳಿದ್ದರು
ಭಾವನೆಗಳಿಗೆ ಕಡಿವಾಣ ಹಾಕಿ
ಬಯಕೆಗಳಿಗೆ ಬೇಲಿ ಹಾಕಿ 
ಮನಸಿನ ಮಾತನ್ನು ನನ್ನೊಳಗೆ ಸಾಯಿಸಿ
ಉಸಿರಿರುವ ಶವದಂತಾಗಿದೆ ನನ್ನೀ ಮನಸ್ಸು


                                                                   - ಬ ಸ ವ ರಾ ಜ  ಹ ರ ಸೂ ರ 

BASAVARAJ HARSUR


BASAVARAJ HARSUR

 ಬ ಸ ವ ರಾ ಜ  ಹ ರ ಸೂ ರ